Untitled
ಮೋಸ ಹೋದೆನಲ್ಲೋ ನಾನು ಶೇಷಶಯನನಿಗೆ ಸೇವಕನಾಗದೆ ವಾಸುದೇವನಿಗೆ ದಾಸನಾಗದೆ
ಮಲ್ಲಿಗೆ ಮೊಲ್ಲೆ ಮರುಗ ದವನ ತಂದು ಪುಲ್ಲಜಾಕ್ಷನ ಪೂಜೆಯ ಮಾಡದೆ
ಯವ್ವನದಲ್ಲಿ ಶ್ರೀ ಹರಿಪದ ನಂಬದೆ ಮೂವತ್ತು ವರುಷ ಮೋಹಾಗ್ನಿಯಲ್ಲಿ ಬಿದ್ದು
ಸತ್ಯಭಾಮೆ ಸರಸನ ಕೊಂಡಾಡದೆ ಮೃತ್ಯು ಭಟರ ಕೈ ಕತ್ತಿಗೆ ಗುರಿಯಾಗಿ
ಲಜ್ಜೆ ಬಿಟ್ಟು ನಾ ಗೆಜ್ಜೆ ಕಟ್ಟಿಕೊಂಡು ಸಜ್ಜನರೊಂದಿಗೆ ಸರ್ವದ ಕುಣಿಯದೆ
ಸರವರ ತರುವಾಗಿ ಸುಸ್ತಿರವಾದಂತ ಪುರಂದರ ವಿಠಲನ ಚರಣಾವ ಪಿಡಿಯದೆ
Reviews
No reviews yet.